ಶತಮಾನಗಳೇನು ಸಹಸ್ರಮಾನಗಳಿಗೂ ಹಳೆಯದು
ಬೆಳಕಿನಕಕ್ಷೆಗೆ ಬಂದವರನು ತೋಳತೆಕ್ಕೆಗೆ ತೆಗೆದು
ಜಗಮಗಿಸುತ್ತಿದೆ. ಧೂಳು ಅಡರಿದೆ ಕಿಟ್ಟಮುಸುಗಿದೆ
ಎಣ್ಣೆತೀರಿದೆಯಾದರೂ ಬಿರುಗಾಳಿಗೂ ಜಗ್ಗದಹಣತೆ
ಇಂದಿನವರೆಗೂ ಉರಿಯುತ್ತಿದೆ
Sunday, June 1, 2008
ಬೆನ್ ಯಹೂದ
ಬೆನ್ ಯಹೂದ ಕೊಟ್ಟಕರೆಗೆ ಜಗತ್ತಿನ ಮೂಲೆಮೂಲೆಗಳಲ್ಲಿ ಪ್ರತಿಧ್ವನಿ ,
ಇಸ್ರೇಲಿನ ಹಕ್ಕಿ ಮರಳಿತು ಗೂಡಿನೆಡೆಗೆ
ಹಳೆಯಹಾಡಿಗೆ ಹೊಸರಾಗ ಮೂಡಿತ್ತು ಚಿಂದಿಗಳಲ್ಲಿ ನಿಘಂಟು
ಅರಬರ ಕಪಿಮುಷ್ಟಿಯಲ್ಲಿ ನಲುಗಿದ್ದಕ್ಕಿಂತ ಸಂಪ್ರದಾಯದ ಬೇಗೆಯಲಿ ನವೆದಿತ್ತು ಜೀವ
ಆಸೆಚಿಗುರಿತು ಬೀಜಬಲಿಯಿತು ಚಿಂತನೆಗೆ ಗರಿಮೂಡಿತ್ತು ಡೀರ್ ನೊಂದಿಗೆ
ನೈರಾಶ್ಯದ ಚಂಡಮಾರುತದಲ್ಲೂ ಆಶಾದೀಪ ತೇಲಿಬಂದಿತ್ತು
ಸಾಗರದ ತೀರಕ್ಕೆ . ಜಗದ ಜನಮಾನಸ ಎಲ್ಲಿದ್ದರೂ ಒಂದೇ ....
ದೇಶ ಭಾಷೆಗೆಂದು ದುಡಿದ ಜೀವಿಗಳ ಜೀವಿತವೇ ಪ್ರಶ್ನೆಯಾದಾಗ ಜೀವಮುದುಡಿ
ದೀಪ ಆರುತ್ತದೆಯಾದರೂ ಪ್ರಯತ್ನ ಹುಸಿಯಾಗಲಿಲ್ಲ ಮತ್ತೆಹೊತ್ತಿತ್ತು ಹೀಬ್ರೂಹಣತೆ.

ಕಾಲ
ಅಂದು ಬೆಳ್ಳಂ ಬೆಳಗ್ಗೆ ವಾಯುವಿಹಾರ ಮಸಣದ ಹತ್ತಿರ
ಯಾರೋ ಮಿಸುಕಾಡಿದಂತೆ ಮೈಯೆಲ್ಲಾ
ಜುಂ ಎಂದಿತು ಒಂದು ಕ್ಷಣ !
ಸಮಾಧಿಯಿಂದ ಎದ್ದುಬಂದ ಶುಭ್ರವೇಷಧಾರಿ
ಅವನಿಗೊಂದೇ ಕುತೂಹಲ ಇದು ಯಾವಕಾಲ ? ಯಾರಕಾಲ ?
ನನ್ನ ಉತ್ತರ ಸದಾ ಸಿದ್ಧ ಎರಡುಸಾವಿರದ ಐದು ಗತಕಲಿ
ಆದರೆ ಕಾಲ ಉಳ್ಳವನದು. ಕೇಳಿದನವ ಅಚ್ಚರಿಯಲಿ ಓಹೋ !
ಮತ್ತೆ ಪ್ರಶ್ನೆ ಅಂದಿನ ಹೋರಾಟದಲಿ ಗೆದ್ದವರಾರು ,
ಯಾವ ಹೋರಾಟ ? ಬಿಡಿಸಿಹೇಳು ಎಂದೆ
ತುಂಡು ಪಂಚೆಯ ಫಕೀರ ಬಿಳೀ ತೊಗಲಿನವರೊಡನೆ ಹೂಡಿದ ಸಮರ
ಗೆಲುವು ನಮ್ಮದೆ ಆದರೂ ಅಂದಿನಿಂದ ಇಂದಿನತನಕ ಸೋಲೇ ಕಾಡುತ್ತಿದೆ
ವೇಷ , ಭಾಷೆ , ಸಂಸ್ಕೃತಿಗಳ ಅನುಕರಣೆಯಲ್ಲಿ ಅನುಸರಣೆಯಲ್ಲಿ
ನಮ್ಮ ನಾವೇ ಮರೆತು ಮತ್ತೆಗುಲಾಮರಾಗಿದ್ದೇವೆ .. ... .. ಮಾತು ಮುಗಿಯುವಮುನ್ನ
ಮತ್ತೇನೋ ಮಿಸುಕಾಡಿತು , ನೋಡಲು ಬೂಟುಕಾಲ ಸಿಪಾಯಿ
ಬಂದವನೇ ನಿನ್ನ ಮಾತು ಮುಗಿಯಿತೆ ಎಂದನಷ್ಟೇ
ಅತ್ತ ತಿರುಗಿ ಅಣ್ಣ ನಮ್ಮ ಕಾಲವೇ ಚೆನ್ನ !
ನಿನ್ನದಕ್ಕೆ ನೀನು ನನ್ನದಕ್ಕೆ ನಾನು ನಿಷ್ಠೆ ತೋರಿ ಪ್ರಾಣ ಬಿಟ್ಟೆವು.
ಇಂದಿನವರಿಗೆ ಅದರ ಗಂಧ ತಿಳಿಯದು . ನಡಿ ನಡಿ ಹೊತ್ತಾಯಿತು !!
ನೆಸರವದೋ ಮೂಡಿತು . ನಾನೂ ಹೊರಟೆ ಮನೆಯೆಡೆಗೆ ,
ಅವರು ಸಮಾಧಿಯೆಡೆಗೆ ನೆಲದ ದುಸ್ಥಿತಿಗೆ ಮರುಗುತ .

Sunday, May 25, 2008
ಇವರು ನಮ್ಮವರು
ಮಾಧ್ಯಮಗಳ ಮಾರಮಾರಿಯಲ್ಲಿ
ಮಾನವೀಯತೆ ಮಾಯವಾಗಿ
ಎಡಪಂಥಿ ಬಲಪಂಥಿಗಳ ಒಳಜಗಳಗಳಲ್ಲಿ
ನಾಡು-ನುಡಿ-ಸಂಸ್ಕೃತಿಗಳ ದಿಕ್ಕಾಪಾಲು
ದೇಶದ ಏಕತೆಬಗ್ಗೆ ಇವರಿಗಿಲ್ಲ ಚಿಂತೆ ,
ತಮ್ಮ ತುತ್ತಿನಚೀಲ ತುಂಬುವಂತೆ
ಹಗರಣಗಳ ಸರಮಾಲೆಗಳಲಿ ಮುಳುಗೇಳುತ್ತಾ
ದೇವರು -ಧರ್ಮ- ರಾಷ್ಟ್ರದಬಗ್ಗೆ ಮಾತನಾಡಿದರೆ
ಕೆಸರೀಕರಣವೆನ್ನುತ್ತ
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಎತ್ತುವವರು
ಕುಲಕ್ಕೇ ಕೊಡಲಿಕಾವಾದವರು
ಜಗಹತ್ತಿ ಉರಿವಾಗ ಸಿಗರೇಟು ಹಚ್ಹ್ಚಿಕೊಳ್ಳುವವರು
ಮನೆಯಲ್ಲೇ ಹುತ್ತಕಟ್ಟಿ ಸರ್ಪಗಾಶ್ರಯದಾತರಾದವರು

ಪುರೋಹಿತರು
ಹರಿದ ಚಪ್ಪಲಿ ಅಳತೆಮೀರಿದ ಬಟ್ಟೆಧರಿಸಿ
ಸಾಲದ್ದಕ್ಕೆ ಶಾಲೆಬಿಡಿಸಿದ ಮಕ್ಕಳನ್ನ ಜೊತೆಯಲ್ಲಿ
ಸೇರಿಸಿಕೊಂಡು ಸನಿಕೆ, ಬರಲು, ಕಸದ ಡಬ್ಬಿಯನಿಡಿದು
ಬೀದಿ ಬೀದಿಗಳಲ್ಲಿ ಬಿದ್ದ ಕಸವನ್ನು
ಹುಡುಕಿತೆಗೆವ ಹಠಮಾರಿಗಳ ದಂಡು !
ಪಾಲೀಶುಮಾಡಿದ ಬೂಟು , ನಡುವಿಗೆ
ಸೊಂಟಪಟ್ಟಿ , ಹೆಗಲಲಿ
ಹೊರಟಿದೆ ದೇಶದ ಮೂಲೆಮೂಲೆಗಳಲಿ ಅಡಗಿಹ
ಶತ್ರುಗಳ ಹುಡುಕಿ ಕೊಲ್ಲುವ ಛಲ
ಬಿಡದ ತ್ರಿವಿಕ್ರಮರಸೇನೆ
ಮತ್ತೊಂದೆಡೆ ಪೆನ್ನು ಪುಸ್ತಕಗಳೇ ಉಳಿಸುತ್ತಿಗೆಯಾಗಿ
ಭವಿಷ್ಯದ ಶಿಲ್ಪಗಳ ಸೃಷ್ಟಿಸುತಿಹ
ಮನುಕುಲದ ಶಿಲ್ಪಿಗಳು
ಇವರೆಲ್ಲರ ಕಾರ್ಯ ಒಂದೇ ಕ್ರಮಬೇರೆ
ನೆಲದ ಮಲವ , ಜನರ ಮಾನವ ಗುಡಿಸುವುದು .
ಮಣ್ಣಿನ ಕಂಪನ್ನು ಹರಡುವುದು . ಕನಸ ಬಿತ್ತುವುದು .

Subscribe to:
Posts (Atom)